Guruji Home    ನಿರ್ವಹಣಾ ತಂಡ

ಮುಖ್ಯ ಪುಟ
ಗುರುಜಿಯ ಬಗ್ಗೆ
ನಿರ್ವಹಣಾ ತಂಡ
ಹೂಡಿಕೆದಾರರು
ನಮ್ಮನ್ನು ಸಂಪರ್ಕಿಸಿ
ಪುನರಾವರ್ತಿತ ಪ್ರಶ್ನೆಗಳು
ಉದ್ಯೋಗ ಅವಕಾಶ
ಪತ್ರಿಕೆಗಳಲ್ಲಿ
ಸಮಾಚಾರಗಳಲ್ಲಿ ಗುರುಜಿ
 
ಅನುರಾಗ್ ಡೊಡ್
ಸ್ಥಾಪಕ  ಮತ್ತು ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ

ಅನುರಾಗ್ ಡೊಡ್ ರವರು ತಂತ್ರಾಂಶ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಹತ್ತು  ವರ್ಷಕ್ಕೂ ಹೆಚ್ಚಿನ ಅನುಭವ ಉಳ್ಳವರಾಗಿದ್ದಾರೆ.  ಇದರ ಜೊತೆಗೆ ಎರಡು ಸಂಸ್ಥೆಗಳನ್ನು ಆರಂಭಿಸಿದ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.  ವೈಸ್ ನೆಟ್ ಸರ್ಚ್ ಇಂಜಿನ್ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಮ್ಯಾನೇಜರ್ ಹುದ್ದೆಯನ್ನು ನಿರ್ವಹಿಸುತ್ತಿದ್ದಾಗ ಅನುರಾಗ್ ಅವರು ಕೋರ್ ಶೋಧಕ ತಂತ್ರಾಂಶವನ್ನು  ಅಭಿವೃಧ್ದಿ ಪಡಿಸುವಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದು ಇವರು ಈ ತಂತ್ರಜ್ಞಾನದ ಸ್ವಾಮ್ಯ ಒಡೆತನದ ಹಕ್ಕು ಪಡೆಯುವ ಹಾದಿಯಲ್ಲಿದ್ದಾರೆ. 2002ರಲ್ಲಿ ಲುಕ್ ಸ್ಮಾರ್ಟ್ ಸಂಸ್ಥೆ ವ್ಯಸ್ ನೆಟ್ ಸಂಸ್ಥೆಯ ಒಡೆತವನ್ನು ತನ್ನದಾಗಿಸಿಕೊಂಡಿತ್ತು.  ಈ-ಬೇ, ಸಿನಾಪ್ಸಿಸ್ ಮತ್ತು ಡೆಲ್ ಸಾಪ್ಟ್ ನಲ್ಲಿ ಹಿರಿಯ ಇಂಜಿನಿಯರಿಂಗ್ ಹುದ್ದೆಗಳನ್ನು ಇವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಐಐಟಿ ದೆಹಲಿಯಿಂದ ಬಿ.ಟೆಕ್ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಅನುರಾಗ್ ರವರು ಆಮೇರಿಕದ ಆನ್ ಅಬ್ರಾರ್ ನಲ್ಲಿರುವ ಮಿಷಿಗನ್ ವಿಶ್ವವಿದ್ಯಾಲಯದಿಂದ ಗಣಕ ಯಂತ್ರ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿ ಕೊಂಡಿದ್ದಾರೆ.  ಐಐಟಿ ದೆಹಲಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಬೇಸಿಗೆ ಪದವಿ ಪೂರ್ವ ಸಂಶೋಧನೆ ಪ್ರಶಸ್ತಿಯನ್ನು  ಪಡೆದುಕೊಂಡ ಶ್ರೇಯಸ್ಸು ಅವರದಾಗಿದೆ.

ಗೌರವ್ ಮಿಶ್ರಾ
ಸ್ಥಾಪಕ ಮತ್ತು ಮುಖ್ಯ ಕಾರ್ಯಚರಣೆ ಅಧಿಕಾರಿ

ಗೌರವ್ ಮಿಶ್ರಾ ರವರು ಸಾಪ್ಟ್ ವೇರ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಹತ್ತು ವರ್ಷಕ್ಕೂ ಹೆಚ್ಚಿನ ಅನುಭವ ಉಳ್ಳವರಾಗಿದ್ದಾರೆ. ಗೌರವ್ ಅವರ ಮೈಕ್ರೂಸಾಪ್ಟ್, ಪಿಲ್ಲರ್ ಡಾಟಾ ಸಿಸ್ಟಮ್ಸ್ ಮತ್ತು ನೋಕಿಯಾ ಸಂಸ್ಥೆಗಳಲ್ಲಿ ಸೀನಿಯರ್ ಇಂಜಿನಿಯರಿಂಗ್ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ನೋಕಿಯಾ ಸಂಸ್ಥೆಯು ತನ್ನದಾಗಿಸಿಕೊಂಡ ಇಂಟೆಲಿಸಿಂಕ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಬ್ಲ್ಯಾಕ್ ಬೆರ್ರಿ, ಟ್ರಿಯೋ ಮತ್ತು ಇತರ ಪಿಡಿಎ ಗಳಲ್ಲಿ ಇನ್ ಸ್ಟೆಂಟ್ ಮೆಸೇಜಿಂಗ್ ಸಲ್ಸೂಷನ್ಸ್ ಅಭಿವೃದ್ಧಿಪಡಿಸಿದ ಶ್ರೇಯಸ್ಸು ಗೌರವ್ ಅವರದಾಗಿದೆ. ಗೌರವ್ ಅವರು ಕ್ಲಿಷ್ಟವಾದ ತಂತ್ರಾಂಶವನ್ನು  ತಯಾರಿಸಲು ಶ್ರಮಿಸಿದ್ದಾರೆ. ಇವರು ಐಐಟಿ ದೆಹಲಿಯಿಂದ ಬಿ.ಟೆಕ್ ಕಂಪ್ಯೂಟರ್ ಸೈನ್ಸ್ ಪದವಿ ಪಡೆದುಕೊಂಡಿದ್ದು ಆಮೇರಿಕದ ಬಫೆಲೋ ನಲ್ಲಿರುವ  ಸ್ಟೇಟ್ ಯೂನಿರ್ವಸಿಟಿ ಆಫ್ ನ್ಯೂಯಾರ್ಕ್ ನಿಂದ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ.

© 2008 Guruji.com