Guruji Home    ಗುರುಜಿಯ ಬಗ್ಗೆ

ಮುಖ್ಯ ಪುಟ
ಗುರುಜಿಯ ಬಗ್ಗೆ
ನಿರ್ವಹಣಾ ತಂಡ
ಹೂಡಿಕೆದಾರರು
ನಮ್ಮನ್ನು ಸಂಪರ್ಕಿಸಿ
ಪುನರಾವರ್ತಿತ ಪ್ರಶ್ನೆಗಳು
ಉದ್ಯೋಗ ಅವಕಾಶ
ಪತ್ರಿಕೆಗಳಲ್ಲಿ
ಸಮಾಚಾರಗಳಲ್ಲಿ ಗುರುಜಿ
 
ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಭಾರತೀಯರ ನಾಯಕತ್ವದಲ್ಲಿ ಅಲಂಕರಿಸುವ ಮೂಲಕ ಜಗತ್ತಿನ ಆಧ್ಯಾತ್ಮಿಕ ಗುರು ಎಂದು ಪ್ರಖ್ಯಾತಿಗಳಿಸಿದ್ದ ಭಾರತ.ಇದೀಗ ತಂತ್ರಜ್ಞಾನದ ಗುರು ಎಂದು ಖ್ಯಾತಿಗಳಿಸಲು ಆರಂಭಿಸಿದೆ.  ಈ ಹಿನ್ನೆಲೆಯಲ್ಲಿ ನಮ್ಮ ದೇಶದಲ್ಲಿಯೇ  ಅಭಿವೃದ್ಡಿ ಪಡಿಸಿರುವ ಜ್ಞಾನ ಮತ್ತು ಕಲೆಯನ್ನು ಗುರುಜಿ ಮೂಲಕ ಭಾರತದ ಬಗ್ಗೆಯ ಮಾಹಿತಿಗಳನ್ನು  ಜಗತ್ತಿಗೆ ಪರಿಚಯಿಸುವ ವಿಶ್ವದರ್ಜೆಯ ಶೋಧಕ ತಂತ್ರಾಂಶ  ಆಗಬೇಕೆಂಬ  ಹೆಬ್ಬಯಕೆ ನಮ್ಮದಾಗಿದೆ.

ಭಾರತದಲ್ಲಿ ಶಿಕ್ಷಕರನ್ನು ಗುರೂಜಿ ಎಂದು ಅತ್ಯಂತ ಗೌರವಯುತವಾಗಿ ಸಂಬೋಧಿಸಲಾಗುತ್ತದೆ. ಗುರೂಜಿ ಜನಸಾಮಾನ್ಯರಿಗೆ ಅಗತ್ಯವಿದ್ದಾಗಲೆಲ್ಲ  ಸಲಹೆ ಮತ್ತು ಸಹಕಾರವನ್ನು ನೀಡುವ ವ್ಯಕ್ತಿ. ಅದೇ ರೀತಿಯಲ್ಲಿ ಎಲ್ಲ ಕ್ಷೇತ್ರಗಳ ಸಂಪೂರ್ಣ ಮಾಹಿತಿಯನ್ನು ಸುಲಭವಾಗಿ ಒದಗಿಸುವರೀತಿಯಲ್ಲಿ ಗುರುಜಿ ಡಾಟ್ ಕಾಂ ಶೋಧನಾ ತಂತ್ರಾಂಶವನ್ನು  ರೂಪಿಸಲಾಗಿದೆ.

ಗುರುಜಿ ಡಾಟ್ ಕಾಂ ಭಾರತ ಮತ್ತು ಭಾರತಕ್ಕೆ ಸಂಬಂಧಪಟ್ಟ ವಿವರಗಳನ್ನು ಒದಗಿಸುವ ಮೊದಲ ಕ್ರಾಲರ್ ಆಧಾರಿತ ಶೋಧಕ ತಂತ್ರಾಂಶ .  ನಮ್ಮ   ಗಣನವಿಧಾನದ ಈ ಶೋಧಕ ತಂತ್ರಾಂಶ  ಭಾರತದ ಬಗೆಗಿನ ವಿವರಗಳನ್ನು ಸ್ವಯಂಚಾಲನೆಯಿಂದ  ಮತ್ತು ಅತ್ಯಂತ ವೇಗವಾಗಿ ಜಾಲತಾಣದಲ್ಲಿ ಮೂಡಿಸಲು ಸಹಕರಿಸುತ್ತದೆ.  ಐಐಟಿ, ಐಐಎಸ್ಸಿ ಮತ್ತು ಇತರ ಪ್ರತಿಷ್ಟಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ಪ್ರಾಮಾಣಿಕ  ಕ್ರಿಯಾಶೀಲ ಯುವಜನರಿಂದ ಕೂಡಿದ ನಮ್ಮ ತಂಡ ಅತ್ಯಂತ ಹುರುಪಿನಿಂದ ಕಾರ್ಯನಿರ್ವಹಿಸುತ್ತಾ ಗುರುಜಿ ಡಾಟ್ ಕಾಂನ್ನು ಉತ್ತಮ ಪಡಿಸಲು ಅವಿರತವಾಗಿ ಶ್ರಮಿಸುತ್ತಿದೆ .

ಭಾರತದ ಹೆಬ್ಬಾಗಿಲಾದ ಗುರುಜಿ.ಕಾಮ್ ಗೆ ನಿಮ್ಮ ಸ್ವಾಗತ

© 2009 Guruji.com